Search This Blog

Wednesday, August 25, 2010

ಬಾಲ್ಯದ ನೆನಪಿನನಂಗಳದ ಕ್ಷಣಗಳು

ನನಗೆ ಆಗ 6 ವರ್ಷ ಇರಬಹುದು ..ನಾನು ನನ್ನ ಅತ್ತೆ ಮನೆಯಲ್ಲಿ ಓದುತಿದ್ದೆ ಆಗ ..ಅಲ್ಲೇ ನನ್ನ ಬಾಲ್ಯದ ಜೀವನ ಜಾಸ್ತಿ ಕಳೆದಿದ್ದು ..ಅಮ್ಮ ಜೊತೆ ಇರಲಿಲ್ಲ ಆಗ..ನಾನು ನನ್ನ ತಮ್ಮ ರವಿ, ಅಣ್ಣ (ತಂದೆಯನ್ನು ಅಣ್ಣ ಅಂತ ಕರಿತಿದ್ದೆವು) ಮಾವ, ಅತ್ತೆ, ಅವರ ಮೂರು ಮಕ್ಕಳು ನನಗಿಂತ ತುಂಬಾ ದೊಡ್ದೊವರು. ಸಣ್ಣ ಹುಡುಗನಿದ್ದಾಗ ಬಹಳ ಚೇಷ್ಟೆ ಮಾಡ್ತಾ ಇದ್ದೆನಂತೆ..ದಿನ ಯಾರ್ಕೈಲಾದರು ಜಗಳ ಆಟ ಆಡಬೇಕಾದರೆ. ದಿನ ಯಾರದ್ರು ಹುಡುಗನ ತಾಯಿ ಬಂದು ನಮ್ಮ ಅತ್ತೆಗೆ ಕಂಪ್ಲೈಂಟ್ ಕೊಡ್ತಾ ಇದ್ದರು....ನೋಡಿ ಕಮಲಮ್ಮನೋವ್ರೆ ನಿಮ್ಮ ಪ್ರಸಾದಿ ನನ್ನ ಮಗಂಗೆ ಹೊಡೆದಿದ್ದಾನೆ..ಹಾಗೆ ಮಾಡಿದ..ಹೇಗೆ ಮಡಿದ ಅಂತ ತಮ್ಮ ಅಳೋ ಮಕ್ಕಳನ್ನು ಕೂಡ ತಂದು ನಮ್ಮ ಅತ್ತೆಗೆ ತೋರಿಸ್ತ ಇದ್ದರು..ಆಮೇಲೆ ಇದ್ದೆ ಇರ್ತಿತ್ತಿತ್ತು ಅತ್ತೆ ಮಾವ ನಿಂದ ಸರಿಯಾಗಿ ಕಡುಬು ಸಿಕ್ತ ಇತ್ತು. ಆದರೆ ಒಂದು ದಿನ.

ಓಕೆ ಹೀಗೆ ಒಂದು ದಿನ ..ಏನಾಯ್ತು ಅಂದ್ರೆ .. ಆಟ ಆಡ್ತಾ ಇದ್ದೆ ಮನೇಲಿ .ನಮ್ಮ ಮನೆ ಅಂದ್ರೆ ಅದು ಮನೆ ಅಲ್ಲ ಅದು ಒಂದು ದೊಡ್ಡ ಬಂಗಲೋ, ದೊಡ್ಡ ವರಾಂಡ ದೊಡ್ಡ ಎರಡು ಜಗುಲಿ ಮನೆ ಪಡಸಾಲೆ ಇಂದ ಹತ್ತು ಮೆಟ್ಟಿಲುಗಳು ಮನೆಯಾ ಒಳಗೆ ಬರುವುದಕ್ಕೆ ಬ್ರಹದಾಕರದ ತೇಗದ ಬಾಗಿಲುಗಳು ಸಣ್ಣ ವಯಸಿನಲ್ಲಿ ಆ ಬಾಗಿಲುಗಳನ್ನೂ ನೂಕುವ ಶಕ್ತಿಯು ಇರಲಿಲ್ಲ ನನಗೆ. ಮನೆ ಒಳಗೆ ಕೂಡ ದೊಡ್ಡದಾದ ಹಾಲ್ ಅಲ್ಲಿ ಆರೆಂಟು ಕಂಬಗಳು ಅಲ್ಲಿ ಜೂಟಾಟ, ಕಣ್ಣ ಮುಚ್ಚಾಲೆ ಆಟ ಆಡುತಿದ್ದೆವು ಒಟ್ಟು ಮೂರು ಅಂತಸ್ತಿನ ಮನೆ..ಮನೆ ಅನ್ನೋದಕ್ಕಿಂತ ಛತ್ರ ಅದು ನಾವು ಬಿಟ್ಟ ಮೇಲೆ ಆ ಮನೆ ಒಂದು ಕಾಲೇಜ್ ಆಗಿ ಪರಿವರ್ತನೆ ಆಯಿತು ..ಆ ಮನೆಯ .ಎರಡನೇ ಮಹಡಿಯಲ್ಲಿ ಒಬ್ಬರು ಟೀಚರ್ ಇದ್ದರು ಅವ್ರು ನಮ್ಮ ಕುಟುಂಬದ ಮಿತ್ರರು ಅವ್ರು ಒಬ್ಬರೇ ಇದ್ದರು ನಮ್ಮ ಕುಟುಂಬ ತಳಗಡೆ ಆದರೆ ಇಬ್ಬರಿಗೂ ಒಂದೇ ಬಾಗಿಲು ಒಂದೇ ಮನೆ ತರಾನೆ ..ಎರಡನೇ ಮಹಡಿಯಲ್ಲಿ ಯಾರು ವಾಸವಿರಲ್ಲಿಲ್ಲ ಅಲ್ಲಿಗೆ ಯಾರು ಹೋಗುವಂತೆಯು ಇರಲಿಲ್ಲ ಇದು ಆಜ್ಞೆ .. ಆದರು ಕೂತುಹಲ ಬಿಡಬೇಕಲ್ಲ..ಕದ್ದು ಕದ್ದು ಹೋಗಿ ಏನಿದೆ ಎಂದು ಹುಡುಕುವ ತವಕ .ಅಲ್ಲಿ ಹಳೆ ಪುರಾತನ ಕಾಲದ ಸಾಮಗ್ರಿಗಳ ಒಂದು ದೊಡ್ಡ ಕಜಾನೆಯಾಗಿತ್ತು ಅಲ್ಲಿ ಇದ್ದ ಹಳೆ ಕಾಲದ ಆಂಟಿಕ್ಸ್ ಗಳು, ಸಾವಿರಾರು ತಾಳೆಗರಿಗಳ ಮೇಲೆ ಬರೆದ ಲೇಖನಗಳು..ಜಿಂಕೆಯ ಕೋಡುಗಳು ..ತೆರೆದಿಟ್ಟ ದೊಡ್ಡ ದೊಡ್ಡ ಮರದ ಪೆಟ್ಟಿಗೆಗಳು ಎಲ್ಲಿ ನೋಡಿದರು. ಜೇಡರ ಬಲೆಗಳು ಎಲ್ಲೆಲ್ಲೂ ಧೂಳಿನಿಂದ ಕೂಡಿರುತ್ತಿತ್ತು ಬೆಳಗ್ಗೆಯೂ ಅಲ್ಲಿ ಕತ್ತಲಿನಂತೆ ಕಾಣುತಿತ್ತು ಇನ್ನು ನಿಮ್ಮ ಕಲ್ಪನೆಗೆ ಸಿಕ್ಕಿಸುವಂತೆ ಹೇಳ್ಬೇಕು ಅಂದ್ರೆ ಆ ಆಪ್ತಮಿತ್ರ ಚಿತ್ರದ ಮನೆಯಲ್ಲಿ ನಾಗವಲ್ಲಿ ಗೆಜ್ಜೆ ಹುಡ್ಕುವ ವಾತಾವರಣ ಅದು. ಹೇಗೆ ಅಲ್ಲಿ ಸಿಕ್ಕ ಸಣ್ಣ ಪುಟ್ಟ ಸಾಮನುಗಳನ್ನು ತಂದು ಆಟವಾಡೋದು ರೂಡಿಯಾಗಿತ್ತು ಅಲ್ಲಿರುವ ಥರ ಥರ ನವರಾತ್ರಿ ಬೊಂಬೆಗಳು ಕೂಡ ತುಂಬಾ ವಿಲಕ್ಷಣವಾಗಿರುತಿತ್ತು ವಿವಿಧ ಭಂಗಿಯ ಮುಖಗಳು ..ಅದಕ್ಕೆ ಸ್ಪ್ರಿಂಗ್ ಇರುವ ಕತ್ತುಗಳು ..ಅಬ್ಬ ಅವು ತಲೆ ಅಲ್ಲಾಡಿಸುವ ರೀತಿ ನೋಡಿದರೆ ವಿಸ್ಮಯವಾಗುತಿತ್ತು. ನಾನು ಕೆಲವೊಂದನ್ನು ತಂದು ಆಟ ಸಾಮಾನಿನ ತರ ಆಟ ಅಡುತಿದ್ದೆ. ಹೀಗೆ ಇದೆ ಯಾವೊದೋ ಕಾರಣಕ್ಕೆ ನಾನು ಒಂದು ದಿನ ಹೋಗಿಲ್ಲ ಅಂತಲೋ ಏನೋ ..ಸರಿಯಾಗಿ ನೆನಪಿಲ್ಲ .ಎಲ್ಲರ ಹತ್ತಿರ ಸಿಕ್ಕಿ ಹಾಕಿಕೊಂಡೆ ಎಲ್ಲ ಗದರಿಸಿ ಕೇಳಿದರು ನಾನು ಆಗ ಬಲು ಮೊಂಡ ಸ್ವಭಾವದವ..ಎದುರುವಾದಿಸುವ ಹಠ ತುಂಬಾ ಇತ್ತು..ದೊಡ್ಡೋರಿಗೆ ಎದುರುವಾದುಸ್ತಿಯೇನೋ .ಅಂತ ಬೇಕಾದಷ್ಟು ಸಲ ಕಡುಬು ಸಿಕ್ಕಿದ್ದವು ..ಆದರೆ ಈ ಸಲ ಅದಕ್ಕೂ ಹೆಚ್ಚಿನದೊಂದು ಶಿಕ್ಷೆ ಕೊಡುವೆ ಎಂದು ಗದರಿಸಿದರು..ನಾನು ಏನೇ ಹೇಳಿದರು ಅವ್ರ ಮಾತು ಕೇಳಲಿಲ್ಲ ಎಲ್ಲರ ಮುಂದೆ ನಮ್ಮ ಮಾವ ಅವರ ಮೊದಲನೇ ಮಗ ವೆಂಕಟೇಶನಿಗೆ ..ಹೆ ಹೋಗೋ ಆ ಮಕಚಿಕಾಯಿ ಬಿಸಿ ಮಾಡಿಕೊಂಡು ಬಾ ಅಂತ ..ಹೇಳಿದರು ..ಅತಾ ಹೋಗಿ ಮಗಚಿಕಾಯಿ ತಂದು ಕೊಟ್ಟ ..ಮತ್ತೆ ನನ್ನ ಹೆದರಿಸಿದರು ಹೇಳ್ತಿಯೋ ಇಲ್ಲವೋ ಅಂತ ನನ್ನ ಮಾವ .ಆಗಲು ಜಗ್ಗಲಿಲ್ಲ ಕೊನೆಗೆ ಆ ಮಗ್ಚಿಕಾಯಿ ನನ್ನ ಬಲಗೈ ಮೇಲೆ ಇಟ್ಟಿದಾಯ್ತು ..ನಾನು ಜೋರಾಗೆ ಚೀರಾಡಿದ್ದು ಆಯಿತು .ಗಟ್ಟಿಯಾಗಿ ಅಳತೊಡಗಿದೆ .ಅವರಿಗೂ ಆಶ್ಚರ್ಯ..ಗಾಬರಿಯಾಯಿತಂತೆ..ಅವ್ರು ನಂತರ ಹೇಳಿದ್ದು ..ನಾನು ವೆಂಕಟೇಶನಿಗೆ ಬರಿ ಸುಮ್ನೆ ಕಣ್ಣು ಮಿಟಿಕಿಸಿ ಬರಿ ಮಗ್ಚಿಕಾಯಿ ತರಲಿಕ್ಕೆ ಹೇಳಿದ್ದೆ ಆತ ಅದನ್ನು ಬಚ್ಚಲ ಮನೆಯ ಒಲೆಯೊಳಗೆ ಇಟ್ಟು ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಕಾಯಿಸಿ ತಂದಿದ್ದ ..ನನ್ನ ಕೈ ಬೊಬ್ಬೆ ಬಂದಿತ್ತು ..ಇಗಲೂ ನನ್ನ ಬಲಗೈ ಮೇಲೆ ಆ ಬರೆಗಳು ಚೆನ್ನಾಗಿಯೇ ಅಚ್ಚಾಗಿದೆ..ಕೊನೆಗೆ ಈ ಘಟನೆಯನ್ನ ನನ್ನ ತಂದೆ ಬಂದ ನಂತರ ವಿವರಿಸಿದೆ ಅವರು ಕೂಡ ಅತ್ತುಬಿಟ್ಟರು ...ಈ ಕಥೆ ಅದೇ ನೆನಪಿನಂಗಳದಲ್ಲಿ .

2 comments:

  1. Nice after all how can we forget those golden days :) I have a similar memory - Devammana Mane, I am inspired to write, thank you :)

    ReplyDelete
  2. Nice. :-)
    Really i am missing my those golden days of my life....
    Sri:-)

    ReplyDelete